ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಉಡುಪಿ ಯಕ್ಷಗಾನ ಕಲಾರಂಗ: ಯಕ್ಷಗಾನ ಪ್ರಶಸ್ತಿ ಪ್ರಕಟ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ನವ೦ಬರ್ 6 , 2013
ಉಡುಪಿಯ ಯಕ್ಷಗಾನ ಕಲಾರಂಗವು ಪ್ರತಿವರ್ಷ ನೀಡುವ ಯಕ್ಷಗಾನ ಪ್ರಶಸ್ತಿಯ 2013ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಗೊಂಡಿದೆ.

ಈ ಬಾರಿ ಎರಡು ಪ್ರಶಸ್ತಿಗಳ ಸೇರ್ಪಡೆಯ ಜತೆಗೆ ಒಟ್ಟು 15 ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 25,000 ರೂ. ನಗದು ಪುರಸ್ಕಾರವನ್ನೊಳಗೊಂಡ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಬೆಳಿಯೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಗೆ ನೀಡಲಾಗುವುದು ಎಂದು ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ವರ್ಷ ಹೊಸದಾಗಿ ಎರಡು ಪ್ರಶಸ್ತಿಗಳು ಸೇರ್ಪಡೆಗೊಂಡಿವೆ. ಹಿರಿಯ ಅರ್ಥದಾರಿ, ಕಲಾವಿದ ಪೆರ್ಲ ಕೃಷ್ಣ ಭಟ್ಟರ ಹೆಸರಿನಲ್ಲಿ ಅವರ ಶಿಷ್ಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಅವರು ಸ್ಥಾಪಿಸಿರುವ ಪ್ರಶಸ್ತಿಯನ್ನು ತಾಳಮದ್ದಲೆ ಕ್ಷೇತ್ರದ ಹಿರಿಯ ಸಾಧಕ ಹಂದಲಸು ಲಕ್ಷ್ಮೀನಾರಾಯಣ ಭಟ್‌ ಅವರಿಗೆ ನೀಡಲಾಗುವುದು. ಹಿರಿಯ ರಂಗಕರ್ಮಿ ಕೆ. ಆನಂದ ಗಾಣಿಗ ಅವರ ನೆನಪಿನಲ್ಲಿ ಅವರ ಸಹೋದರ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ಅವರು ಸ್ಥಾಪಿಸಿರುವ ಪ್ರಶಸ್ತಿಯನ್ನು ಹಿರಿಯ ಕಲಾವಿದ ಕಪ್ಪೆಕೆರೆ ಮಾಧವ ಹೆಗಡೆ ಸ್ವೀಕರಿಸಲಿದ್ದಾರೆ.

ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿಗೆ ಕೆ.ಎಚ್‌. ದಾಸಪ್ಪ ರೈ ಪುತ್ತೂರು,
ನಿಟ್ಟೂರು ಸುಂದರ ಶೆಟ್ಟಿ -ಮಹೇಶ್‌ ಡಿ. ಶೆಟ್ಟಿ ಪ್ರಶಸ್ತಿಗೆ ಸುದರ್ಶನ ವಿ. ಶೆಟ್ಟಿ ಪೊಳಲಿ ಬಂಟ್ವಾಳ,
ಪ್ರೊ| ಬಿ.ವಿ. ಆಚಾರ್ಯ ಪ್ರಶಸ್ತಿಗೆ ಬ್ರಹ್ಮಾವರದ ನಾರಾಯಣ ಪೂಜಾರಿ,
ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿಗೆ ಸಾಗರದ ಕೆ.ಜಿ. ರಾಮರಾವ್‌ ಪುರಪ್ಪೆಮನೆ, ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಟಾರ್‌
ಭಾಗವತ ವಾದಿರಾಜ ಹೆಬ್ಟಾರ್‌ ಪ್ರಶಸ್ತಿಗೆ ಕಾಸರಗೋಡು ಮುಳಿಗದ್ದೆ ಪೆರುವಡಿ ನಾರಾಯಣ ಭಟ್‌,
ಶಿರಿಯಾರ ಮಂಜು ನಾಯ್ಕ ಪ್ರಶಸ್ತಿಗೆ ಆರ್ಗೋಡು ಮೋಹನದಾಸ ಶೆಣೈ ಕಮಲಶಿಲೆ,
ಕೋಟ ವೈಕುಂಠ ಪ್ರಶಸ್ತಿಗೆ ರೆಂಜಾಳ ರಾಮಕೃಷ್ಣ ರಾವ್‌,
ಪೆರ್ಲ ಕೃಷ್ಣ ಭಟ್‌ ಪ್ರಶಸ್ತಿಗೆ ಶಿವಮೊಗ್ಗ ಹಂದಲಸು ಲಕ್ಷ್ಮೀನಾರಾಯಣ ಭಟ್‌,
ಬಿ. ಜಗಜ್ಜೀವನ್‌ದಾಸ್‌ ಶೆಟ್ಟಿ ಪ್ರಶಸ್ತಿಗೆ ನಾಗೇಶ್‌ ಗಾಣಿಗ ಕೋಣಿ,
ಕೆ. ವಿಶ್ವಜ್ಞ ಶೆಟ್ಟಿ ಪ್ರಶಸ್ತಿಗೆ ಕುಮಟಾ ಬಾಡ ಸುಕ್ರಪ್ಪ ನಾಯ್ಕ,
ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಗೆ ಹೊನ್ನಾವರ ಕಪ್ಪೆಕೆರೆ ಮಹದೇವ ಹೆಗಡೆ,
ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿಗೆ ಹೊನ್ನಾವರ ಗುಂಡಿಬೈಲ್‌ ವಾಸುದೇವ ವಿಷ್ಣು ಭಟ್‌,
ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿಗೆ ಶೃಂಗೇರಿ ಗೋಪಾಲಕೃಷ್ಣಯ್ಯ ಎಚ್‌.ಎಸ್‌.,
ಐರೋಡಿ ರಾಮ ಗಾಣಿಗ ಪ್ರಶಸ್ತಿಗೆ ಕಾಸರಗೋಡು ಕೊರಗಪ್ಪ ನಾಯ್ಕ ಕಾಟುಕುಕ್ಕೆ,
ಪ್ರಭಾವತಿ ವಿ. ಶೆಣೈ, ಯು. ವಿಶ್ವನಾಥ ಶೆಣೈ ಪ್ರಶಸ್ತಿಗೆ ಕಾಸರಗೋಡು ಕೂಡ್ಲು ಸದಾನಂದ ಮದ್ಲೆಗಾರ,
ಯಕ್ಷಚೇತನ ಪ್ರಶಸ್ತಿಗೆ ಬನ್ನಂಜೆ ನಾರಾಯಣ ಆಯ್ಕೆಯಾಗಿದ್ದಾರೆ ಎಂದವರು ತಿಳಿಸಿದರು.

ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಎಸ್‌.ವಿ. ಭಟ್‌, ನಾರಾಯಣ ಎಂ. ಹೆಗಡೆ, ಎಂ. ಗಂಗಾಧರ ರಾವ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮದ್ದಲೆ ತಯಾರಕರೂ ಪ್ರಶಸ್ತಿ ಭಾಜನರು

ಕಲಾರಂಗ ಈ ಬಾರಿ ಎರಡು ಹೊಸ ಪ್ರಶಸ್ತಿಗಳನ್ನು ಸೇರ್ಪಡೆಗೊಳಿಸಿದೆ. ಸಮಾಜದಲ್ಲಿ ವಿಶಿಷ್ಟವಾಗಿ ಗುರುತಿಸಿ ಸಾಧನೆ ಮಾಡಿದವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಅವರ ಕುಟುಂಬಿಕರು ಮುಂದೆ ಬಂದಿದ್ದಾರೆ. ಈ ಬಾರಿ ಕಲಾವಿದರು, ಕಲಾಸಂಸ್ಥೆ ಮಾತ್ರವಲ್ಲದೆ ಮದ್ದಲೆ ತಯಾರಿಕೆಯಲ್ಲಿ ಸಾಧನೆ ಮಾಡಿದವರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ಸದಾನಂದ ಮದ್ಲೆಗಾರ ಆಯ್ಕೆಯಾಗಿದ್ದಾರೆ ಎಂದು ಕಲಾರಂಗದ ಕಾರ್ಯದರ್ಶಿ ತಿಳಿಸಿದರು.

ನ. 10ರಂದು ಪ್ರದಾನ

ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಸಹಯೋಗದಲ್ಲಿ ನ. 10ರಂದು ಅಪರಾಹ್ನ 5 ಗಂಟೆಗೆ ರಾಜಾಂಗಣದಲ್ಲಿ ನಡೆಯಲಿದೆ. ಅಪರಾಹ್ನ 2ರಿಂದ ತಾಳಮದ್ದಲೆ ಜರಗಲಿದೆ ಎಂದು ಮುರಲಿ ಕಡೆಕಾರ್‌ ತಿಳಿಸಿದರು.







ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ